ಉಷಾ ಶ್ರೀನಿವಾಸನ್ (ಜನನ ೧೬ ಜುಲೈ ೧೯೬೨), ಸಾಮಾನ್ಯವಾಗಿ ಇವರನ್ನು ಉಷಾ ಎಂದು ಕರೆಯಲಾಗುತ್ತದೆ. ಇವರು ಕೂಚಿಪುಡಿಯಲ್ಲಿ ಪರಿಣತಿ ಹೊಂದಿರುವ ಭಾರತೀಯ ಚಲನಚಿತ್ರ ಶಾಸ್ತ್ರೀಯ ನೃತ್ಯಗಾರ್ತಿ. ಅವರು ತಮಿಳು ಕುಟುಂಬದಲ್ಲಿ ಜನಿಸಿದರು. ಅವರ ತಂದೆ, ವೇದ ಪಂಡಿತರಾದ ಪಿ. ಶ್ರೀನಿವಾಸನ್. == ಆರಂಭಿಕ ಜೀವನ == ಶ್ರೀನಿವಾಸನ್ ತೆಲಂಗಾಣದ ಹೈದರಾಬಾದ್ ಮೂಲದವರು. ಇವರು ಕೂಚಿಪುಡಿ ನೃತ್ಯ ಪಟುಗಳಾದ ಪಸುಮಾರ್ಥಿ ಶೇಷುಬಾಬು, ಭಾಗವತುಲ ಸೇತುರಾಮ್, ಉಮಾ ರಾಮರಾವ್, ಚಿಂತಾ ಆದಿನಾರಾಯಣ ಶರ್ಮಾ ಮತ್ತು ವೇದಾಂತಂ ರಾಧೆ ಶರ್ಮಾ ಅವರ ಬಳಿ ತರಬೇತಿ ಪಡೆದಿದ್ದಾರೆ. ಅವರು ಪೌರಾಣಿಕ ಕೂಚಿಪುಡಿ ನೃತ್ಯಗಾರರಾದ ಶೋಭಾ ನಾಯ್ಡು ಮತ್ತು ರಾಜಾ ಮತ್ತು ರಾಧಾ ರೆಡ್ಡಿ ಅವರಿಂದ ಕೂಚಿಪುಡಿ ನೃತ್ಯದಲ್ಲಿ ಸ್ಫೂರ್ತಿ ಪಡೆದರು. ಅವರ ತಾಯಿ ಕೂಡ ಭರತನಾಟ್ಯದಲ್ಲಿ ಪರಿಣತಿ ಹೊಂದಿರುವ ಶಾಸ್ತ್ರೀಯ ನೃತ್ಯಗಾರ್ತಿ. ಇವರು ಹೈದರಾಬಾದಿನ ಪೊಟ್ಟಿ ಶ್ರೀರಾಮುಲು ತೆಲುಗು ವಿಶ್ವವಿದ್ಯಾಲಯದ ಮೂಲಕ ಕೂಚಿಪುಡಿ ನೃತ್ಯದಲ್ಲಿ ಎಂಎ ಮಾಡಿದರು. ಅವರು ತಮ್ಮ ಇಪ್ಪತ್ತರ ಹರೆಯದಲ್ಲಿ ಸ್ವತಂತ್ರ ಪ್ರದರ್ಶಕಿ ಮತ್ತು ನೃತ್ಯ ಸಂಯೋಜಕಿಯಾಗಿ ಹೊರಹೊಮ್ಮಿದರು ಮತ್ತು ತಿರುಪತಿಯಲ್ಲಿ ಶ್ರೀ ರಾಜ ರಾಜೇಶ್ವರಿ ಆರ್ಟ್ಸ್ ಅಕಾಡೆಮಿ ಎಂಬ ನೃತ್ಯ ಶಾಲೆಯನ್ನು ನಡೆಸುತ್ತಿದ್ದಾರೆ. ತಿರುಮಲ್ ತಿರುಪತಿ ದೇವಸ್ಥಾನದಲ್ಲಿ ಕೂಚಿಪುಡಿ ಉಪನ್ಯಾಸಕಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ೨೦೦೫ ರಲ್ಲಿ, ಅವರು ಕಂಗುಂಡಿ ಕುಪ್ಪಂ ಬೀದಿ ನಾಟಕಂ - ಕೂಚಿಪುಡಿ ಭಾಗವತಂ-ತುನಾನಾತ್ಮಕ ಪರಿಶೀಲನದಲ್ಲಿ ಡಾಕ್ಟರೇಟ್ ಪಡೆದರು. == ವೃತ್ತಿ ಜೀವನ == ಶ್ರೀನಿವಾಸನ್ ಒಬ್ಬ ನಿಪುಣ ಕೂಚಿಪುಡಿ ನೃತ್ಯಗಾರರು. ಅವರು ಚಿಕ್ಕ ವಯಸ್ಸಿನಲ್ಲೇ ಪ್ರದರ್ಶನ ನೀಡಲು ಪ್ರಾರಂಭಿಸಿದರು. ಕಷ್ಟಕರವಾದ ಸಮತೋಲನದ ಭಂಗಿಗಳನ್ನು ಹಿಡಿದಿಟ್ಟುಕೊಳ್ಳುವ ಅವರ ಸಮಂಜಸವಾದ ಸಾಮರ್ಥ್ಯವು ಅವರ ಸೂಕ್ಷ್ಮವಾದ ಲಯ ಪ್ರಜ್ಞೆಯೊಂದಿಗೆ ಪ್ರೇಕ್ಷಕರನ್ನು ಸುಲಭವಾಗಿ ಬೆರಗುಗೊಳಿಸುತ್ತದೆ. ೨೦೦೬ ರಲ್ಲಿ ಅವರು ಯು‌ಎಸ್‌ಎ ನಲ್ಲಿ ಹೈದರಾಬಾದ್‌ನ ರಾಜ ರಾಜೇಶ್ವರಿ ಆರ್ಟ್ಸ್ ಅಕಾಡೆಮಿಯಿಂದ ಆಯೋಜಿಸಲ್ಪಟ್ಟ ಕಾರ್ಯಕ್ರಮವನ್ನು ನಡೆಸಿಕೊಟ್ಟರು. == ಪ್ರಶಸ್ತಿಗಳು == ನಾಟ್ಯಮಯೂರಿ ಪ್ರಶಸ್ತಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಯುವ ಕಲಾವಿದರಿಗೆ ರಾಷ್ಟ್ರೀಯ ವಿದ್ಯಾರ್ಥಿವೇತನ ಕೂಚಿಪುಡಿ ನೃತ್ಯಕ್ಕೆ ಸಮರ್ಪಣೆಗಾಗಿ ಸಂಗೀತ ನಾಟಕ ಅಕಾಡೆಮಿ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ == ನೃತ್ಯ ಪ್ರದರ್ಶನದ ವಿವರಗಳು == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ://../?=5iBbB3qpMR4 ://../. 2020-11-19 ವೇಬ್ಯಾಕ್ ಮೆಷಿನ್ ನಲ್ಲಿ. ://../-----------/2006-/----16958-1. 2023-03-27 ವೇಬ್ಯಾಕ್ ಮೆಷಿನ್ ನಲ್ಲಿ.